nirmANoM ke pAvana yuga meM hama caritra nirmANa na bhuuleM ! svArtha sAdhanA kI AMdhI meM vasudhA kA kalyANa na bhuuleM !!
mAnA agama agAdha siMdhu hai saMGarShoM kA pAra nahIM hai kintu DUbanA maJadhAroM meM sAhasa ko svikAra nahI hai jaTila samasyA sulaJAne ko nUtana anusandhAna na bhuuleM !!
shIla vinaya AdarSa SreShThatA tAra binA JaMkAra nahI hai shikShA kyA svara sAdha sakegI yadi naitIka AdhAra nahIM hai kIrti kaumudI kI garimA meM sa.mskR^iti kA sammAna na bhuule !!
AviShkAroM kI kR^iutiyoM meM yadi mAnava kA pyAra nahI hai sR^ijanahIna vij~jAna vyartha hai prANI kA upakAra nahI hai bhautikatA ke utthAnoM meM jIvana kA utthAna na bhuuleM !!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ! ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ! ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ! ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ! ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ ದಿವ್ಯಾರಣ್ಯ. ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ. ಕುಮಾರವ್ಯಾಸರ ಮಂಗಳಧಾಮ, ಕವಿಕೋಗಿಲೆಗಳ ಪುಣ್ಯಾರಾಮ. ನಾನಕ ರಮಾನಂದ ಕಬೀರರ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ.
ತೈಲಪ ಹೊಯ್ಸಳರಾಳಿದ ನಾಡೆ, ಡಂಕಣ ಜಕಣರ ನೆಚ್ಚಿನ ಬೀಡೆ. ಕೃಷ್ಣ ಶರಾವತಿ ತುಂಗಾ, ಕಾವೇರಿಯ ವರ ರಂಗ. ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ.
ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ! ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ.
ಕನ್ನಡ ನುಡಿ ಕುಣಿದಾಡುವ ಗೇಹ! ಕನ್ನಡ ತಾಯಿಯ ಮಕ್ಕಳ ದೇಹ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೆ, ಜಯ ಹೇ ರಸಋಷಿಗಳ ಬೀಡೆ!
Victory to you Mother Karnataka, The daughter of Mother India! Hail the land of beautiful rivers and forests! Hail the abode of saints and seers!
A new jewel in the crown of Goddess Earth, You are a trove of sandalwood, beauty and gold. Victory to you Mother Karnataka, the daughter of Mother India, where Rama and Krishna had their incarnations.
Resonance of the Vedas is the Mother’s lullaby, Your fervour is what gives Her life. Rows of green mountains are your necklaces. Victory to you Mother Karnataka, the daughter of Mother India who is hailed by Kapila, Patañjali, Gautama and Jina.
Garden of peace for all communities, A sight that allures the connoisseurs, A garden where Hindus, Christians, Muslims, Parsis and the Jains (can grow together); The site where many kings like Janaka ruled; A heaven for singers and musicians.
The body of the children of Mother Kannada! The house where the Kannada Tongue plays in joy! Victory to you Mother Karnataka, The daughter of Mother India! Hail the land of beautiful rivers and forests! Hail the abode of saints and seers!